ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಮಾಜ ಸೇವಕಿ ಲಲಿತಾ ಸದಾನಂದ ಹೆಜಮಾಡಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ರಿಯಾಝ್ ಮುದರಂಗಡಿ, ಪೂರ್ವಾಧ್ಯಕ್ಷರಾದ ರಾಮಕೃಷ್ಣ ಆಚಾರ್ಯ ಮತ್ತು ಅಬ್ದುಲ್ ಹಮೀದ್, ವಲಯ ಸೇನಾನಿ ರಮೀಝ್ ಹುಸೈನ್, ನಿಯೋಜಿತ ಕಾರ್ಯದರ್ಶಿ ಮೊಹಮ್ಮದ್ ನಿಯಾಝ್, ಸುಧಾಕರ್ ಕೆ. ಉಪಸ್ಥಿತರಿದ್ದರು.