ಪಡುಬಿದ್ರಿ ರೋಟರಿಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ

ಪಡುಬಿದ್ರಿ: ಅದಮಾರು ಪಿಪಿಸಿ ಸಂಸ್ಥೆಯಲ್ಲಿ ಜೂನ್ 25ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪಡುಬಿದ್ರಿ ರೋಟರಿ ಕ್ಲಬ್ ಉಚಿತ ಮಾಸ್ಕ್‍ಗಳನ್ನು ವಿತರಿಸಿದೆ.

ಈ ಸಂದರ್ಭ ರೋಟರಿ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಮಾತನಾಡಿ, ಈಗಾಗಲೇ ರೋಟರಿ ಸಂಸ್ಥೆಯಿಂದ ಭಾರತದಲ್ಲಿ 103 ಕೋಟಿ ಹಣವನ್ನು ಕೋವಿಡ್ ನಿಯಂತ್ರಣಕ್ಕಾಗಿ ಅರ್ಪಿಸಿದೆ. 98 ಕೋಟಿಯಷ್ಟು ರೂಪಾಯಿ ಮೌಲ್ಯದ ಮಾಸ್ಕ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಖರೀದಿಸಿದೆ. ರೋಟರಿ ಜಿಲ್ಲೆಯಿಂದ 96ಲಕ್ಷ ರೂಪಾಯಿಯನ್ನು ಮಾಸ್ಕ್ ಮತ್ತಿತರ ಸೊತ್ತುಗಳನ್ನು ವಿತರಿಸಿದೆ. ಅಂತೆಯೇ ಈಗಾಗಲೇ ಹೆಜಮಾಡಿ ಶಾಲೆಗಳಿಗೂ ಅಲ್ಲಿ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ವಿಧ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದರು.

ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಪಡುಬಿದ್ರಿ ರೋಟರಿ ಅಧ್ಯಕ್ಷ ರಿಯಾಜ್ ಮುದರಂಗಡಿ, ಕೃಷಿ ಹಾಗೂ ಕೈಗಾರಿಕಾ ಸ್ವಯಂ ಸಮಿತಿ ಅಧ್ಯಕ್ಷ ಸುಮೀತ್ ಶೆಟ್ಟಿ, ಮಾಧವ ಸುವರ್ಣ, ಕೇಶವ ಸಾಲ್ಯಾನ್, ಮಹಮ್ಮದ್ ನಿಯಾಜ್, ಸಂತೋಷ್ ಪಡುಬಿದ್ರಿ, ಲೋಹಿತಾಶ್ವ ಸುವರ್ಣ, ಸುಧಾಕರ ಮತ್ತಿತರರು ಉಪಸ್ಥಿತರಿದ್ದರು