ಪಡುಬಿದ್ರಿ: ಪೂಲ ವಿಠಲ ಶೆಟ್ಟಿ ಸ್ಮøತಿ ಪ್ರಶಸ್ತಿ

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವಠಾರದಲ್ಲಿ ಕಳೆದ 23 ವರ್ಷಗಳಿಂದ ನಟರಾಜ ಪಿ.ಎಸ್. ನೇತೃತ್ವದಲ್ಲಿ ನಡೆದು ಬಂದಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳದ ವತಿಯಿಂದ ಹಮ್ಮಿಕೊಂಡ ಯಕ್ಷಗಾನ ಬಯಲಾಟದ ಸಂದರ್ಭ ಇಬ್ಬರು ಹಿರಿಯ ಯಕ್ಷಗಾನ ಕಲಾವಿದರಿಗೆ ಪೂಲ ವಿಠಲ ಶೆಟ್ಟಿ ಸ್ಮøತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಂಬೈ ಭಾರತ್ ಕೆಫೆ ರಾಧಾ ವಿ.ಶೆಟ್ಟಿ ಮತ್ತು ಮಕ್ಕಳ ಸೇವೆ ಆಟದಂದು ಮೇಳದಲ್ಲಿ ಸಂಗೀತಗಾರರಾಗಿ, ಕಟೀಲು ಮೇಳದಲ್ಲಿ ಕಳೆದ 30 ವರ್ಷಗಳಿಂದ ಪ್ರಧಾನ ಭಾಗವತರಾಗಿ ಪಾರಂಪರಿಕ ಸೊಗಡನ್ನು ಮೆರೆಸುತ್ತಿರುವ ಭಾಗವತ ಪೆಲತಡ್ಕ ಗೋಪಾಲಕೃಷ್ಣ ಮಯ್ಯ ಮತ್ತು ಕಳೆದ 43 ವರ್ಷಗಳಿಂದ ವಿವಿಧ ಮೇಳಗಳಲ್ಲಿ ಹಾಗೂ 25 ವರ್ಷಗಳಿಂದ ಕಟೀಲು ಮೇಳದಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಿರುವ ಬಣ್ಣದ ವೇಷಧಾರಿ ಶಿವರಾಮ ಶೆಟ್ಟಿ ಜೋಗಿಮಕ್ಕಿಯವರಿಗೆ ಎರ್ಮಾಳು ಪೂಲ ವಿಠಲ ಶೆಟ್ಟಿ ಸಂಸ್ಮರಣಾ ಸಮಿತಿಯ ವತಿಯಿಂದ ಪೂಲ ವಿಠಲ ಶೆಟ್ಟಿ ಸ್ಮøತಿ ಪ್ರಶಸ್ತಿ-2020 ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಕಟೀಲು ಮೇಳದ ಪೆರುವಾಯಿ ನಾರಾಯಣ ಶೆಟ್ಟಿಯವರನ್ನು ಚಿನ್ನದ ಪದಕದೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಕಟೀಲು ಶ್ರೀ ದುಗಾಘಪರಮೇಶ್ವರೀ ದೇವಳದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಉಪಸ್ಥಿತರಿದ್ದು ಆಶಿರ್ವಚಿಸಿದರು.
ಎರ್ಮಾಳು ಉದಯ ಶೆಟ್ಟಿ, ಸತೀಶ್ ವಿ.ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ, ನಟರಾಜ ಪಿ.ಎಸ್., ತೇಜಸ್ವಿ ಎನ್.ರಾವ್ ಮುಖ್ಯ ಅತಿಥಿಗಳಾಗಿದ್ದರು.

ಕದ್ರಿ ನವನೀತ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ನಟರಾಜ ಪಿ.ಎಸ್. ಪ್ರಶಸ್ತಿ ಪತ್ರ ವಾಚಿಸಿದರು.
ಇದೇ ಸಮದರ್ಭ ಕಟೀಲು ಮೇಳದಿಂದ ಮಾ..ನಿಷಾದ ಸೇವೆಯಾಟ ನಡೆಯಿತು.