ಪಡುಬಿದ್ರಿ: ನಾಗದೇವರ ಸನ್ನಿಧಿಗೆ ಶಿಲಾನ್ಯಾಸ

ಪಡುಬಿದ್ರಿ: ಕಂಚಿನಡ್ಕ ಶ್ರೀ ಗುರು ರಾಘವೇಂದ್ರ ಮಂದಿರ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ನಾಗದೇವರ ಸನ್ನಿಧಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು.

ರಾಜ್ಯ ಧಾರ್ಮಿಕ ಪರಿಷತ್‍ನ ಆಗಮ ಶಾಸ್ತ್ರ ಪಂಡಿತ ಕೇಂಜ ಶ್ರೀಧರ ತಂತ್ರಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಗುರು ರಾಘವೇಂದ್ರ ಮಂದಿರ ಆಡಳಿತ ಮಂಡಳಿ ಅಧ್ಯಕ್ಷ ಎರ್ಮಾಳು ಶಶಿಧರ ಕೆ ಶೆಟ್ಟಿ, ಕಾರ್ಯದರ್ಶಿ ಡಾ. ಎನ್.ಟಿ. ಅಂಚನ್, ಕೋಶಾಧಿಕಾರಿ ವಿಶುಕುಮಾರ್ ಶೆಟ್ಟಿಬಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ, ಕಾರ್ಯದರ್ಶಿ ವಿಷ್ಣುಮೂರ್ತಿ ಭಟ್, ಶ್ರೀನಿವಾಸ ಶರ್ಮ ಶಿಲಾನ್ಯಾಸ ನೆರವೇರಿಸಿದರು.
2020ರ ಜನವರಿ ಉತ್ತರಾಯಣದ ಬಳಿಕ ಶ್ರೀ ಗುರು ರಾಘವೇಂದ್ರ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಕ್ಷೇತ್ರಾಭಿವೃದ್ಧಿಗಾಗಿ ಆಗಸ್ಟ್ 16ರ ಸೂರ್ಯೋದಯಕ್ಕೆ ಆರಂಭವಾಗಿ 17ರ ಸೂರ್ಯೋದಯದವರೆಗೆ ಅಖಂಡ ಭಜನಾ ಸಂಕೀರ್ತನೆ ಆಯೋಜಿಸಲಾಗಿದೆ

ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ಜಾನಪದ ವಿದ್ವಾಂಸ ಡಾ. ವೈ.ಎನ್ ಶೆಟ್ಟಿ, ಶಿಲ್ಪಿ ಮುರುಗೇಶ್ ಕಾರ್ಕಳ, ಪ್ರಮುಖರಾದ ನವೀನಚಂದ್ರ ಜೆ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉದಯ ಶೆಟ್ಟಿ ಇನ್ನಾ, ದಯಾಕರ ಶೆಟ್ಟಿ, ಶ್ರೀನಾಥ ಹೆಗ್ಡೆ, ದಯಾನಂದ ಶೆಟ್ಟಿ, ಅನಿಲ್ ಶೆಟ್ಟಿ ಪೇಟೆಮನೆ, ರಾಧೇಶ್ ಶೆಟ್ಟಿ, ನಾಗರಾಜ ಭಟ್ ನಂದಿಕೂರು, ಶೈಲೇಶ್ ಉಪಾಧ್ಯಾಯ, ಚಂದ್ರಶೇಖರ ಶಾಂತಿ, ಡಾ. ಮನೋಜ್‍ಕುಮಾರ್ ಶೆಟ್ಟಿ, ನವೀನ ಆಚಾರ್ಯ, ನಾಗೇಶ್ ಆಚಾರ್ಯ, ಶ್ರೀಧರ ಆಚಾರ್ಯ ಪಾದೆಬೆಟ್ಟು, ಹರೀಶ್ ಕಂಚಿನಡ್ಕ, ಯುವರಾಜ್ ಉಪಸ್ಥಿತರಿದ್ದರು.

ಫೋಟೋ: ಕಂಚಿನಡ್ಕ ಶ್ರೀ ಗುರು ರಾಘವೇಂದ್ರ ಮಂದಿರ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ನಾಗದೇವರ ಸನ್ನಿಧಿಗೆ ಶಿಲಾನ್ಯಾಸ ನೆರವೇರಿಸಿ ರಾಜ್ಯ ಧಾರ್ಮಿಕ ಪರಿಷತ್‍ನ ಆಗಮ ಶಾಸ್ತ್ರ ಪಂಡಿತ ಕೇಂಜ ಶ್ರೀಧರ ತಂತ್ರಿ ಪೂಜೆ ಸಲ್ಲಿಸಿದರು.