ಪಡುಬಿದ್ರಿ ಕಡಲ ತಡಿಯಲ್ಲಿ ರೋಟರಿ ವರ್ಣ ವಿಹಾರ-2019

ಎಳೆಯ ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕು- ಚಿತ್ರ ಕಲಾವಿದ ಸೂರಜ್ ಎಸ್.ಎಸ್.

ಪಡುಬಿದ್ರಿ ಕಡಲ ತಡಿಯಲ್ಲಿ ರೋಟರಿ ವರ್ಣ ವಿಹಾರ-2019
ಪಡುಬಿದ್ರಿ{ ಎಳೆಯ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಪೋಷಕರು ಶಿಕ್ಷಕರು ಮಾಡಬೇಕಾಗಿದೆ. ಮುಖ್ಯವಾಗಿ ಚಿತ್ರಕಲಾ ಪ್ರತಿಭೆಗಳಿಗೆ ವಯೋಮಾನದ ಮಿತಿಯಿಲ್ಲ. ಚಿತ್ರಕಲೆಯೊಂದಿಗೇ ಚಿತ್ರಕಾರ ಎತ್ತರೆತ್ತರಕ್ಕೆ ಬೆಳೆಯಬಹುದಾಗಿದೆ. ರೋಟರಿ ಪಡುಬಿದ್ರಿ ಇಂತಹ ಪ್ರತಿಭೆಗಳನ್ನು ಹೊರ ತೆಗೆವ ವರ್ಣ ವಿಹಾರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಕರ್ನಾಟಕ ಸಾಂಸ್ಕøತಿಕ ಎಕಾಡೆಮಿ ಕರ್ನಾಟಕ ರಾಜ್ಯೋತ್ಸವ ಪುರಸ್ಕøತ ಚಿತ್ರ ಕಲಾವಿದ ಮಂಗಳೂರಿನ ಸೂರಜ್ ಎಸ್. ಎಸ್. ಹೇಳಿದರು.

ಅವರು ಪಡುಬಿದ್ರಿಯ ಕಡಲತಡಿಯಲ್ಲಿ ನ. 16ರಂದು ಪಡುಬಿದ್ರಿ ರೋಟರಿ ಕ್ಲಬ್, ಇನ್ನರ್‍ವೀಲ್ ಕ್ಲಬ್, ಪಡುಬಿದ್ರಿ ಸಾಯಿರಾಧಾ ಹೆರಿಟೇಜ್ ಸಹಯೋಗದಲ್ಲಿ ಹಾಗೂ ಉಜ್ವಲ್ ಪ್ರಿಂಟರ್ಸ್ ಪಡುಬಿದ್ರಿಯ ಪ್ರಾಯೋಜಕತ್ವದಲ್ಲಿ ಸತತ ನಾಲ್ಕನೇ ವರ್ಷದ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆಸಲಾದ ವರ್ಣ ವಿಹಾರ-2019ನ್ನು ವಿನಾಯಕನ ಚಿತ್ರ ಬಿಡಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ರೋಟರಿ ಸೇನಾನಿ ರಮೀಜ್ ಹುಸೈನ್ ಹಾಗೂ ಪಡುಬಿದ್ರಿ ಓಂಕಾರ್ ಕಾಸ್ಟ್ಯೂಮ್ಸ್‍ನ ಪಾಲುದಾರ ಉದಯಕುಮಾರ್ ಭಟ್ ಮಾತನಾಡಿದರು.

ವೇದಿಕೆಯಲ್ಲಿ ಪಡುಬಿದ್ರಿಯ ಉಜ್ವಲ್ ಪ್ರಿಂಟರ್ಸ್‍ನ ಅಬ್ದುಲ್ ವಾಹೀದ್, ಓಂಕಾರ್ ಕಾಸ್ಟ್ಯೂಮ್ಸ್‍ನ ಮತ್ತೋರ್ವ ಪಾಲುದಾರರಾದ ಗೀತಾ ಅರುಣ್, ಕಾರ್ಯಕ್ರಮ ನಿರ್ದೇಶಕಿ ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಿಯಾಜ್ ಮುದರಂಗಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವರ್ಣ ವಿಹಾರ ಸ್ಪರ್ಧಾ ಉದ್ದೇಶಗಳ ಬಗ್ಗೆ ಸವಿವರ ಮಾತನಾಡಿದರು.

ರೋಟರಿ ಅಧ್ಯಕ್ಷ ರಿಯಾಜ್ ಮುದರಂಗಡಿ ಸ್ವಾಗತಿಸಿದರು. ಸುಧಾಕರ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಪಡುಬಿದ್ರಿ ರೋಟರಿ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ವಂದಿಸಿದರು. ಸುತ್ತಮುತ್ತಲ ಶಾಲೆಗಳ ಸುಮಾರು 75 ವಿದ್ಯಾರ್ಥಿಗಳು ಈ ಚಿತ್ರ ಬಿಡಿಸುವ ವರ್ಣ ವಿಹಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.