ನಿಶಾಂತ್ ಎಸ್.ಕೋಟ್ಯಾನ್ ಬ್ಯಾಂಕಾಕ್ ಟೆಕ್ವಾಂಡೋ ಸ್ಪರ್ಧೆಗೆ ಆಯ್ಕೆ

ಪಡುಬಿದ್ರಿ: ಹೆಜಮಾಡಿ ಕೋಡಿಯ ನಿಶಾಂತ್ ಎಸ್.ಕೋಟ್ಯಾನ್‍ರವರು ಈ ಮಾಸಾಂತ್ಯದಲ್ಲಿ ಥೈಲ್ಯಾಂಡ್‍ನ ಬ್ಯಾಂಕಾಕ್‍ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇವರು ಭಾರತೀಯ ಟೆಕ್ವಾಂಡೋ ಸಂಸ್ಥೆಯಿಂದ ಆಯ್ಕೆಗೊಂಡು ಭಾರತ ತಂಡದ 59ಕೆಜಿ ವಿಭಾಗದಲ್ಲಿ ಪ್ರತಿನಿಧಿಸುತ್ತಿದ್ದಾರೆ.
2016 ಎಪ್ರಿಲ್-ಮೇ ತಿಂಗಳಲ್ಲಿ ಚೀನಾದ ಕಿಂಗ್‍ಡಾವ್‍ನಲ್ಲಿ ನಡೆದ ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ ಎರಡು ಕಂಚಿನ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದರು.ಹಾಗೂ ದಕ್ಷಿಣ ಕೊರಿಯಾದ ವಲ್ರ್ಡ್ ಟೆಕ್ವಾಂಡೋ ಹೆಡ್‍ಕ್ವಾರ್ಟರ್ಸ್‍ನಿಂದ ಬ್ಲ್ಯಾಕ್ ಬೆಲ್ಟ್ ಗಳಿಸಿದ್ದಾರೆ.

ತಲಪಾಡಿಯ ಶಾರದಾ ವಿದ್ಯಾ ನಿಕೇತನ ವಸತಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಅವರು ಗುರುರಾಜ್ ಇಟಗಿಯವರಿಂದ ತರಬೇತಿ ಪಡೆದಿದ್ದಾರೆ.ಇವರು ಹೆಜಮಾಡಿ ಕೋಡಿಯ ಶ್ರೀಕಾಂತ್ ಟಿ.ಕೋಟ್ಯಾನ್-ಮಂಗಳಾ ಎಸ್.ಕೋಟ್ಯಾನ್ ದಂಪತಿಯ ಪುತ್ರ.