ನಿಧನ: ಸುಧಾಕರ ಕೋಟ್ಯಾನ್

ಪಡುಬಿದ್ರಿ: ಹೆಜಮಾಡಿ ಮೂಡುಕರೆ ಕರಿತೋಟ ನಿವಾಸಿ ಸುಧಾಕರ ಕೋಟ್ಯಾನ್(58) ಅಲ್ಪ ಕಾಲದ ಅಸೌಖ್ಯದಿಂದ ಮೇ 31 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಅವಿವಾಹಿತರಾಗಿದ್ದ ಅವರು ನಿರಂತರ 34 ವರ್ಷ ಶಬರಿಮಲೆ ಧೀಕ್ಷಾಧಾರಿಯಾಗಿದ್ದರು.
ಅವರಿಗೆ ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಸಹಿತ 4 ಸಹೋದರರು, 2 ಸಹೋದರಿಯರು ಇದ್ದಾರೆ.