ನಿಧನ: ಸಂತೋಷ್ ಎಲ್.ಮೆಂಡನ್

ಪಡುಬಿದ್ರಿ: ಹೆಜಮಾಡಿಯ ಪಲಿಮಾರು ಹೊಸಾಗ್ಮೆ ಶ್ರೀ ರಾಮಾನುಗೃಹ ನಿವಾಸಿ ಸಂತು ಭಟ್ಟರು ಎಂದೇ ಪ್ರಖ್ಯಾತಿ ಪಡೆದ ಸಂತೋಷ್ ಎಲ್.ಮೆಂಡನ್(52) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾದರು.
ಕಳೆದ 27 ವರ್ಷಗಳಿಂದ ಹೆಜಮಾಡಿಯ ಪಲಿಮಾರು ಶ್ರೀ ಸೀತಾರಾಮ ಭಜನಾ ಮಂದಿರದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಜತಗೆ ಶ್ರೀ ಸೀತಾರಾಮ ಎಂಬ ಶಾಮಿಯಾನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಪಲಿಮಾರು ಮೊಗವೀರ ಮಹಾಸಭಾದ ಸಕ್ರಿಯ ಸದಸ್ಯರೂ ಆಗಿದ್ದರು.
ಅವರಿಗೆ ತಾಯಿ, ಪತ್ನಿ, 2 ಪುತ್ರಿ, 3 ಸಹೋದರಿಯರು ಇದ್ದಾರೆ.