ನಿಧನ: ಶಿವರಾಮ ಸಾಲ್ಯಾನ್

ಪಡುಬಿದ್ರಿ: ಹೆಜಮಾಡಿ ಗುಂಡಿ ನಿವಾಸಿ ಶಿವರಾಮ ಸಾಲ್ಯಾನ್(59) ಅಲ್ಪ ಕಾಲದ ಅಸೌಖ್ಯದಿಂದ ಜ.9ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಮುಕ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಸುಮಾರು 26 ವರ್ಷಗಳಿಂದ ಹೇರ್ ಕಟ್ಟಿಂಗ್ ಸೆಲ್ಯೂನ್ ಹೊಂದಿದ್ದ ಅವರು ಅಲ್ಲಿನ ಗೆಳೆಯರ ಬಳಗದ ಸಂಚಾಲಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.