ನಿಧನ: ಲೋಕು ಶೇರಿಗಾರ

ಮೂಲ್ಕಿ: ದಲಿತ ಸಮಾಜದ ಹಿರಿಯ ಮುಖಂಡ, ನಾದಸ್ವರ ವಾದಕ ಲೋಕು ಶೇರಿಗಾರ(70) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಹಳೆಯಂಗಡಿಯ ಲೈಟ್‍ಹೌಸ್ ಸ್ವಗೃಹದಲ್ಲಿ ನಿಧನರಾದರು.

ಸುಮಾರು 5 ದಶಕಗಳ ಕಾಲ ಭೂತ ಕೋಲ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾದಸ್ವರ ವಾದಕರಾಗಿ ಉಭಯ ಜಿಲ್ಲೆಗಳಲ್ಲಿ ಜನಪ್ರಿಯರಾಗಿದ್ದ ಅವರಿಗೆ ಪತ್ನಿ, 2 ಪುತ್ರಿ ಇದ್ದಾರೆ.