ನಿಧನ: ರೋಹಿತ್ ಹೆಜಮಾಡಿ (Rohit Hejamady)

ಪಡುಬಿದ್ರಿ: ಹೆಜಮಾಡಿಯ ರೋಹಿತ್ ಇಲೆಕ್ಟ್ರಿಕಲ್ಸ್ ಮಾಲೀಕ ರೋಹಿತ್ ಹೆಜಮಾಡಿ(54) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.  ಅವರಿಗೆ ಪತ್ನಿ,ಪುತ್ರಿ ಇದ್ದಾರೆ.

ರೋಹಿತ್‍ರವರು ಹೆಜಮಾಡಿ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಕ್ರಿಕೆಟ್,ಫುಟ್ಬಾಲ್,ವಾಲಿಬಾಲ್ ಪಂದ್ಯಾವಳಿಗಳಿಗೆ ನಿರಂತರ ಫ್ಲಡ್‍ಲೈಟ್ ವ್ಯವಸ್ಥೆ,ರಂಗಭೂಮಿ ಪ್ರದರ್ಶನಗಳಿಗೆ ಬೆಳಕು ಮತ್ತು ಧ್ವನಿವರ್ಧಕ ವ್ಯವಸ್ಥೆ,ಜಾತ್ರಾ ಮಹೋತ್ಸವ,ನಾಗಮಂಡಲಗಳಿಗೆ ವಿದ್ಯುತ್ ದೀಪಾಲಂಕಾರ ಮುಂತಾದ ಗುತ್ತಿಗೆ ಸೇವೆ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು.