ನಿಧನ: ರಮಾನಂದ ರಾಯರು

ಪಡುಬಿದ್ರಿ: ಎಲ್ಲೂರಿನಲ್ಲಿ ವಕೀಲರು ಎಂದೇ ಪ್ರಸಿದ್ಧರಾಗಿದ್ದ ಎಲ್ಲೂರು ಸೀಮೆಯ ಪ್ರಸಿದ್ಧ ರಾಯರ ಮನೆತನದ ರಮಾನಂದ ರಾಯರು(83) ಜೂನ್ 25ರಂದು ಎಲ್ಲೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, 2 ಪುತ್ರಿ ಇದ್ದಾರೆ.

ನೇರ ನಡೆನುಡಿಯ, ಸಹಜ ವ್ಯಕ್ತಿತ್ವದ ಪ್ರಯೋಗಶೀಲ ಕೃಷಿಕರಾಗಿದ್ದ ವಕೀಲರು ಓರ್ವ ಸಾಧಕ, ದುಡಿಮೆಗಾರ, ವಸ್ತುನಿಷ್ಠೆ, ಪ್ರಾಮಾಣಿಕತೆಯನ್ನು ಗೌರವಿಸುತ್ತಿದ್ದವರು. ಆದರೆ ಅಷ್ಟೇ ಛಲವಾದಿ, ಖಂಡಿತವಾದಿ. ಅವರ ಬದುಕಿನ ವಿಧಾನದಲ್ಲಿ ಹತ್ತು ಹಲವು ಮೌಲ್ಯಗಳು, ಸಂದೇಶಗಳು, ಅನುಸರಿಸಬೇಕಾದ ಜೀವನಾದರ್ಶಗಳಿದ್ದವು.