ನಿಧನ: ಪ್ರೇಮಾ ಡಿ.ಕೋಟ್ಯಾನ್

ಪಡುಬಿದ್ರಿ: ಮೂಲತಃ ಹೆಜಮಾಡಿಯವರಾದ ಮುಂಬೈ ಉದ್ಯಮಿ ಪ್ರೇಮಾ ಡಿ.ಕೋಟ್ಯಾನ್(67) ಅಲ್ಪ ಕಾಲದ ಅಸೌಖ್ಯದಿಂದ ಮುಂಬಯಿಯಲ್ಲಿ ನಿಧನರಾದರು.

ಅವರಿಗೆ ಇಬ್ಬರು ಪುತ್ರರು,ಓರ್ವ ಪುತ್ರಿ ಇದ್ದಾರೆ.

ಮುಂಬಯಿ ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದ ಅವರು ಕೊಡುಗೈ ದಾನಿಯಾಗಿದ್ದು, ಹೆಜಮಾಡಿ ಬಿಲ್ಲವರ ಸಂಘ ಮತ್ತು ಹೆಜಮಾಡಿ ಬ್ರಹ್ಮಶ್ರೀ ಬೈದರ್ಕಳ ಗರಡಿಯ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.