ನಿಧನ: ಪಿ.ಕೆ. ಶಾಬು ಹಾಜಿ

ಪಡುಬಿದ್ರಿ: ಇಲ್ಲಿನ ಕಂಚಿನಡ್ಕ ನಿವಾಸಿ ಪಿ.ಕೆ. ಶಾಬು ಹಾಜಿ ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಧ್ಯಾಹ್ನ ಅವರ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರಿಗೆ 102 ವರ್ಷ ವಯಸ್ಸಾಗಿತ್ತು.

ಪಡುಬಿದ್ರಿ ಜಮಾಅತ್‍ನ ಹಿರಿಯ ವ್ಯಕ್ತಿಯಾಗಿದ್ದ ಇವರು ಪಡುಬಿದ್ರಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಕಂಚಿನಡ್ಕ ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್‍ನ ಸ್ಥಾಪಕರಾಗಿದ್ದ ಮೃತರು ಸ್ಥಾಪಕ ಗೌರವಾಧ್ಯಕ್ಷರಾಗಿದ್ದರು.
ಮೃತರಿಗೆ ನಾಲ್ಕು ಪುತ್ರ, ನಾಲ್ಕು ಪುತ್ರಿ ಇದ್ದಾರೆ.