ನಿಧನ: ಪಿ.ಎನ್.ನಾರಾಯಣ ರಾವ್

ಪಡುಬಿದ್ರಿ: ಬ್ರಾಹ್ಮಣ ಸಮಾಜದ ಹಿರಿಯರಾದ ಪಡುಬಿದ್ರಿಯ ಬಂಗಾರು ಮನೆತನದ ಪಿ. ನಾರಾಯಣ ರಾವ್(94), ಎರ್ಮಾಳು ಅಳಿವೆಕೋಡಿಯ ಸ್ವಗೃಹದಲ್ಲಿ ಜೂ. 13ರಂದು ನಿಧನ ಹೊಂದಿದರು.

ಅವರಿಗೆ ಪತ್ನಿ, ಪರ್ಯಾಯ ಅದಮಾರು ಮಠ-ಶ್ರೀಕೃಷ್ಣ ಮಠಗಳ ಸಂಚಾಲಕರಲ್ಲೋರ್ವರಾದ ವೈ.ಎನ್.ರಾಮಚಂದ್ರ ರಾವ್ ಸೇರಿದಂತೆ ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ
.
ನಾರಾಯಣ ರಾಯರು ತಮ್ಮ ಎಳವೆಯಲ್ಲಿಯೇ ತಮಿಳುನಾಡಿಗೆ ಉಪಜೀವನ ಮಾರ್ಗವನ್ನು ಅರಸಿ ಸಾಗಿದ್ದು ಮುಂದೆ ಕೊಯಮತ್ತೂರಲ್ಲಿ ಹೋಟೆಲ್, ಮಧುರೆಯಲ್ಲಿ ಕ್ಯಾಂಟೀನ್ ಉದ್ಯಮಿಗಳೂ ಆಗಿದ್ದರು