ನಿಧನ: ಪದ್ರ ಹೊಸಮನೆ ಕೃಷ್ಣ ಆರ್.ಶೆಟ್ಟಿ

ಪಡುಬಿದ್ರಿ: ಪ್ರಗತಿಪರ ಕೃಷಿಕ ಪದ್ರ ಹೊಸಮನೆ ಕೃಷ್ಣ ಆರ್.ಶೆಟ್ಟಿ(79) ಭಾನುವಾರ ಅಲ್ಪಕಾಲದ ಅಸೌಖ್ಯದಿಂದ ಪಡುಬಿದ್ರಿ ಪಾದೆಬೆಟ್ಟುವಿನ ಸ್ವಗೃಹ ಹೊಸಮನೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರಿ, 2 ಪುತ್ರ ಇದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಅವರು ಯೌವನದ ಕಾಲದಲ್ಲಿ ಕಂಬಳ ಕೋಣಗಳನ್ನು ಬಿಡಿಸುವ ಕಾರ್ಯದಲ್ಲಿ ಬಹುಪ್ರಸಿದ್ಧರಾಗಿದ್ದರು. ಪಡುಬಿದ್ರಿ ಬಂಟರ ಸಂಘದ ಸ್ಥಾಪಕ ಸದಸ್ಯರಾಗಿದ್ದ ಅವರು ಪ್ರಸ್ತುತ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.