ನಿಧನ: ನಿವೃತ್ತ ಮುಖ್ಯ ಶಿಕ್ಷಕಿ ವಸಂತಿ ಟೀಚರ್ (Vasanthi teacher)

ಪಡುಬಿದ್ರಿ: ಬಿಲ್ಲವ ಸಮಾಜದ ಹಿರಿಯ ಮಹಿಳೆ,ನಿವೃತ್ತ ಶಿಕ್ಷಕ ದಿ.ದಾಸು ಬಲ್ಚಡರ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ವಸಂತಿ ಟೀಚರ್(79) ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಶಿಕ್ಷಣ ಇಲಾಖೆಯಲ್ಲಿ 38 ವರ್ಷಗಳ ಕಾಲ,ಬೆಳ್ತಂಗಡಿ,ಸಾಂತೂರು ಕೊಪ್ಲ,ಪಡುಬಿದ್ರಿಯ ಸ.ಹಿ.ಪ್ರಾ.ಶಾಲೆ ಮತ್ತು ಹೆಜಮಾಡಿಯ ಸ.ಹಿ.ಪ್ರಾ.ಶಾಲೆಗಳಲ್ಲಿ ಸೇವೆ ಸಲ್ಲಿಸಿ ಹೆಜಮಾಡಿಯಲ್ಲಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದರು.

ಪಡುಬಿದ್ರಿಯ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಬಿಲ್ಲವ ಸಮಾಜದಲ್ಲಿ ಸಕ್ರಿಯವಾಗಿ, ಅಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿಯನ್ನು ಕಟ್ಟಿ ಬೆಳೆಸಿದವರಾಗಿದ್ದರು.ಪಡುಬಿದ್ರಿ ನವಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ, ನವಶಕ್ತಿ ಮಹಿಳಾ ವೆಲ್‍ಫೇರ್ ಸೊಸೈಟಿಯ ನಿರ್ದೇಶಕಿಯಾಗಿ, ನವಶಕ್ತಿ ಭಜನಾ ಮಂಡಳಿಯ ಸಕ್ರಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದ ಇವರು ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು.
ಅವರಿಗೆ ಪುತ್ರ,ಪುತ್ರಿ ಇದ್ದಾರೆ.