ನಿಧನ: ನಿವೃತ್ತ ಮುಖ್ಯೋಪಾಧ್ಯಾಯ ಎಮ್.ವಿಠಲ ಶೆಟ್ಟಿ

ಪಡುಬಿದ್ರಿ: ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿಯವರ ತಂದೆ, ನಿವೃತ್ತ ಮುಖ್ಯೋಪಾಧ್ಯಾಯ ಎಮ್.ವಿಠಲ ಶೆಟ್ಟಿ(79) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತೆಕ್ಕಟ್ಟೆಯ ಸ್ವಗೃಹ ಮಲ್ಯಾಡಿ ಕಾವಡಿ ಮನೆಯಲ್ಲಿ ನಿಧನರಾದರು.

ಕೋಟೇಶ್ವರ, ಹೂಡೆ ಬೇಂಗ್ರೆ, ಕಡೆಕಾರು, ಪರ್ಕಳ ಶೆಟ್ಟಿಬೆಟ್ಟು ಸಹಿತ ವಿವಿದಡೆ ಅಧ್ಯಾಪಕರಾಗಿ, ಬಳಿಕ ಪಡುಬಿದ್ರಿ ಮತ್ತು ಎರ್ಮಾಳಿನಲ್ಲಿ ಮುಖ್ಯೋಪಾಧ್ಯಾಯರಾಗಿ ಸುದೀರ್ಘ ಅವಿಯ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಗುರುವಾರ ಎಲ್ಲೂರು-ಮಾಣಿಯೂರಿನ ಹೊಸಮನೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.
ಅವರಿಗೆ ಪತ್ನಿ, ಪುತ್ರಿ, 2 ಪುತ್ರ ಇದ್ದಾರೆ.