ನಿಧನ ದುರ್ಗೇಶ್ ದಿಂಗಾ ಬಲೇಗಾರ್

ಪಡುಬಿದ್ರಿ: ಇಲ್ಲಿಗೆ ಸಮಿಪದ ಪಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ದುರ್ಗೇಶ್ ದಿಂಗಾ ಬಲೇಗಾರ್(38)ರವರು ಹೃದಯಾಘಾರದಿಂದ ಭಾನುವಾರ ಅಂಕೋಲಾ ಕೇಣಿಯ ಬಾಳೆಕೊಪ್ಪದ ಸ್ವಗೃಹದಲ್ಲಿ ನಿಧನರಾದರು.
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದ ಅವರು 2009ರ ಸೆಪ್ಟಂಬರ್‍ನಲ್ಲಿ ಪಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ನಿಯುಕ್ತಿಗೊಂಡಿದ್ದರು.

ಕಾಲೇಜಿನ ಗ್ರಂಥಾಲಯ, ಇಕೋ ಕ್ಲಬ್ ಸಹಿತ ವಿವಿಧ ಚಟುವಟಿಕೆಗಳನ್ನು ನಡೆಸಿಕೊಡುವುದರ ಜತೆಗೆ ಸಂಸ್ಥೆಯ ಕ್ರೀಡಾ ಚಟುವಟಿಕೆಗಳ ಸಂಪೂರ್ಣ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಕಾಲೇಜಿಗೆ ಸತತ ಎರಡು ವರ್ಷಗಳಲ್ಲಿ ಶೇ.100 ಫಲಿತಾಂಶ ಬರಲು ಅವರ ಅವಿರತ ಪ್ರಯತ್ನವೂ ಕಾರಣವಾಗಿತ್ತು.

ಪಡುಬಿದ್ರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ತನ್ನ ಅಜ್ಜಿ ಮೃತಪಟ್ಟ ಹಿನ್ನೆಲೆಯಲ್ಲಿ ಹುಟ್ಟೂರಿಗೆ ತೆರಳಿದ್ದರು.
ಅವರಿಗೆ ತಾಯಿ, ಪತ್ನಿ, ಇಬ್ಬರು ಸಹೋದರರು ಇದ್ದಾರೆ.