ನಿಧನ: ದೀನನಾಥ ಪಿ. ಸಾಲ್ಯಾನ್

ಪಡುಬಿದ್ರಿ: ಹೆಜಮಾಡಿಯ ಚಿಕ್ಕ ಹೌಸ್‍ನ ದೀನನಾಥ ಪಿ. ಸಾಲ್ಯಾನ್(98) ವೃದ್ಯಾಪ್ಯದ ಕಾರಣ ಸೋಮವಾರ ಪಡುಬಿದ್ರಿಯ ಸಧೀಕ್ಷಾ ಮನೆಯಲ್ಲಿ ನಿಧನರಾದರು.

ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರು ಹೆಜಮಾಡಿಯ ಗೀತಾ ಮಂದಿರ ಮತ್ತು ದೋಗ್ರ ಪಟ್ಟೆಬಲೆ ಫಂಡ್‍ನ ಸ್ಥಾಪಕರಲ್ಲಿ ಓರ್ವರಾಗಿದ್ದರು. ಅವರು ಹೆಜಮಾಡಿ ಮೊಗವೀರ ಮಹಾಸಭಾದ ಸಕ್ರಿಯ ಸದಸ್ಯರಾಗಿದ್ದರು.