ನಿಧನ: ಜಗನ್ನಾಥ ಎಸ್.ಸುವರ್ಣ

ಪಡುಬಿದ್ರಿ:ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿಯ ನಿವೃತ್ತ ರೀಜನಲ್ ಮ್ಯಾನೇಜರ್, ಮೂಲತಃ ಎರ್ಮಾಳು ತೆಂಕ ನಿವಾಸಿ ಜಗನ್ನಾಥ ಎಸ್.ಸುವರ್ಣ(79) ಮುಂಬಯಿ ಘಾಟ್‍ಕೊಪರ್‍ನ ಸ್ವಗೃಹದಲ್ಲಿ ಮೇ 11 ರಂದು ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಇದ್ದಾರೆ. ಎರ್ಮಾಳು ತೆಂಕ ಮೊಗವೀರ ಸಭಾ ಅಧ್ಯಕ್ಷರಾಗಿ 35 ವರ್ಷ ಸೇವೆ ಸಲ್ಲಿಸಿದ್ದ ಅವರು ಎರ್ಮಾಳು ತೆಂಕ ಎಜ್ಯುಕೇಶನ್ ಸೊಸೈಟಿಯ ಮುಂಬೈ ಸಮಿತಿಯ ಉಪಾಧ್ಯಕ್ಷರಾಗಿ, ಎರ್ಮಾಳು ತೆಂಕ ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಶಾಲಾ ಕಟ್ಟಡ ನಿರ್ಮಾಣಕ್ಕೆ ತನ್ನ ತಂದೆ ಶೀನ ಎಮ್.ಪುತ್ರನ್ ನೆನಪಲ್ಲಿ ರೂ 20 ಲಕ್ಷ ದೇಣಿಗೆಯನ್ನೂ ನೀಡಿದ್ದರು.