ನಿಧನ: ಎಮ್.ಎಚ್.ಮೊಹಮ್ಮದ್

ಪಡುಬಿದ್ರಿ: ಹೆಜಮಾಡಿಯ ಎನ್.ಎಸ್.ರೋಡ್ ನಿವಾಸಿ, ಪಡುಬಿದ್ರಿ ಗ್ರಾಪಂ ಮಾಜಿ ಸದಸ್ಯ ಎಮ್.ಎಚ್.ಮೊಹಮ್ಮದ್(69) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸೊಸೈಟಿಯ ಮಾಜಿ ಉಪಾಧ್ಯಕ್ಷರಾಗಿ, ಕನ್ನಂಗಾರ್ ಕಿಫಾಯತುಲ್ ಮಸಾಕೀನ್ ಅಸೋಸಿಯೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸಾಮಾಜಿಕ ಹೋರಾಟಗಾರರಾಗಿ ಪ್ರಸಿದ್ಧರಾಗಿದ್ದರು.
ಅವರಿಗೆ ಪತ್ನಿ, 4 ಪುತ್ರಿ ಇದ್ದಾರೆ.