ನಿಧನ: ಉದ್ಯಮಿ ಹಾಜಿ ಪಿ.ಕೆ.ಅಬೂಸಾಲಿಹ್ ನಿಧನ

ಪಡುಬಿದ್ರಿ: ನಡ್ಸಾಲು ಗ್ರಾಮದ ಕನ್ನಂಗಾರಿನ ಪಂಬತೋಟ ಹೌಸ್‍ನ ನಿವಾಸಿ ಹಾಜಿ ಪಿ.ಕೆ. ಅಬೂಸಾಲಿಹ್ (89) ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಇವರು ವಯೋಸಹಜ ಖಾಯಿಲೆಯಿಂದ ಬಳಲುತಿದ್ದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ.

ಎಳೆಯ ವಯಸ್ಸಿನಲ್ಲಿ ಮೂಡಿಗೆರೆ ತಾಲ್ಲೂಕಿನ ಹ್ಯಾಂಡ್‍ಪೋಸ್ಟ್‍ನಲ್ಲಿ ವ್ಯಾಪಾರ ಆರಂಭಿಸಿದ ಇವರು ಗ್ರೀನ್ ಸ್ಟೋರ್ ಗ್ರೂಫ್ ಆಫ್ ಕಂಪೆನಿಯ ಮಾಲೀಕರಾಗಿದ್ದರು. ಅಲ್ಲದ ಹ್ಯಾಂಡ್‍ಪೋಸ್ಟ್‍ನಲ್ಲಿ ಕೃಷಿಕರಾಗಿದ್ದ ಇವರು, ಹಿರಿಯ ಮುತ್ಸದ್ದಿ ಕೊಡುಗೈದಾನಿಯಾಗಿದ್ದರು.ಸಮಾಜ ಸೇವೆಯೊಂದಿಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಹ್ಯಾಂಡ್‍ಫೋಸ್ಟ್ ಜುಮಾ ಮಸೀದಿಯಲ್ಲಿ ಸುದೀರ್ಘ 40ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಶಂಸುಲ್ ಉಲಮಾ ಅಕಾಡೆಮಿಯ ಸ್ಥಾಪಕ ಉಪಾಧ್ಯಕ್ಷರಾಗಿ, ಮೂಡಿಗೆರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.