ನಿಧನ: ಉದ್ಯಮಿ ವಾಸುದೇವ ರಾವ್

ಪಡುಬಿದ್ರಿ: ಹೊಸ ಒಕ್ಲು ನಿವಾಸಿ ಕೆ. ವಾಸುದೇವ ರಾವ್(85) ಪಡುಬಿದ್ರಿಯ ಸ್ವಗೃಹದಲ್ಲಿ ಜು. 11ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಅವರಿಗೆ ಪತ್ನಿ, ಪುತ್ರ, 2 ಪುತ್ರಿ ಇದ್ದಾರೆ.

ಸುಮಾರು 30ವರ್ಷಗಳ ಕಾಲ ಮುಂಬಯಿನಲ್ಲಿ ಒಎನ್‍ಜಿಸಿಯಂತಹ ಪ್ರತಿಷ್ಟಿತ ಕಂಪೆನಿಗಳಿಗೆ ಬಿಡಿಭಾಗಗಳನ್ನು ಪೂರೈಸುವ ಉದ್ದಿಮೆದಾರರಾಗಿದ್ದರು.