ದೀಪಾವಳಿ ಹಬ್ಬದ ಪೂರ್ವಭಾವೀ ದೀಪೋತ್ಸವ

ಪಡುಬಿದ್ರಿ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪಡುಬಿದ್ರಿ ಘಟಕ ಸಮಿತಿ ವತಿಯಿಂದ ದೀಪಾವಳಿ ಹಬ್ಬದ ಪೂರ್ವಭಾವಿಯಾಗಿ ಪಡುಬಿದ್ರಿ ಶ್ರೀ ದುರ್ಗಾದೇವಿ ಮಂದಿರದಲ್ಲಿ ದೀಪೋತ್ಸವ ಸಹಿತ ದೇವಿಗೆ ವಿಶೇಷ ಅಲಂಕಾರ ಪೂಜೆ ಭಾನುವಾರ ನಡೆಯಿತು.

ಯೋಜನೆಯ ಗುಂಪಿನ ಸದಸ್ಯರು ಭಜನೆ ನಡೆಸಿಕೊಟ್ಟರು. ಮಂದಿರದ ಪುರೋಹಿತ ಉಮೇಶ್ ಆಚಾರ್ಯ ಪೂಜೆ ನೆರವೇರಿಸಿದರು. ಯೋಜನೆಯ ಸುರತ್ಕಲ್ ಹಾಗೂ ಮೂಲ್ಕಿ ವಲಯದ ಸಂಯೋಜಕಿಯರಾದ ಸುನೀತಾ, ಸಾವಿತ್ರಿ, ಸೇವಾ ದೀಕ್ಷಿತೆಯರಾದ ಶಕುಂತಲ ಶೆಟ್ಟಿ, ಆಶಾಲತಾ, ಭಾಗ್ಯಜ್ಯೋತಿ, ದಿವ್ಯಶ್ರೀ, ಸುಮಂಗಲ, ಯೋಜನೆಯ ಪಡುಬಿದ್ರಿ ಘಟಕದ ಸಮಿತಿಯ ಅಧ್ಯಕ್ಷ ಕೇಶವ ಮೊಯಿಲಿ, ಪದಾಧಿಕಾರಿಗಳಾದ ಜಯಂತಿ, ಹೇಮಲತಾ, ದುರ್ಗಾದೇವಿ ಮಂದಿರದ ಮೇಲ್ವಿಚಾರಕ ಮಾಧವ ಆಚಾರ್ಯ ಇದ್ದರು.