ಗುತ್ತಿಗೆ ಆಯುಷ್ ವೈದ್ಯರ ಮುಷ್ಕರಕ್ಕೆ ಉಡುಪಿ ಜಿಲ್ಲಾ ಆಯುಷ್ ಬೆಂಬಲ

ಪಡುಬಿದ್ರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರಕಾರಿ ಆಯುಷ್ ಗುತ್ತಿಗೆ ವೈದ್ಯರು ಮತ್ತು ಖಾಸಗಿ ಆಯುಷ್ ವೈದ್ಯರು ಶನಿವಾರದಿಂದ ಆರಂಭಿಸಲಿರುವ ವೈದ್ಯಕೀಯ ಸೇವೆ ಸ್ಥಗಿತ ಮುಷ್ಕರಕ್ಕೆ ಉಡುಪಿ ಜಿಲ್ಲಾ ಆಯುಷ್ ಬೆಂಬಲ ವ್ಯಕ್ತಪಡಿಸಿ ಸೇವೆ ಸ್ಥಗಿತಗೊಳಿಸಲಿದೆ.

ಜಿಲ್ಲಾ ಆಯುಷ್ ಅಧ್ಯಕ್ಷ ಡಾ.ಎನ್.ಟಿ.ಅಂಚನ್ ಪಡುಬಿದ್ರಿ ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಗುತ್ತಿಗೆ ವೈದ್ಯರುಗಳ ಹಾಗೂ ಆಯುಷ್ ಶಿಷ್ಯ ವೇತನ ತಾರತಮ್ಯ ನಿವಾರಣೆ ಕುರಿತು ಮತ್ತು ಖಾಸಗಿ ವೈದ್ಯರ ಬೇಡಿಕೆಗಳ ಕುರಿತು ರಾಜ್ಯ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಸಾಂಕೇತಿಕವಾಗಿ ಮೇ 5ರಿಂದ ಕಪ್ಪು ಬಟ್ಟೆ ಧರಿಸಿ ಸೇವೆ ಮುಂದುವರಿಸಿದ್ದು, ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದಿರುವುದರಿಂದ ಮೇ 23 ಶನಿವಾರದಿಂದ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ.