ಕೊರೊನಾ ಶಂಕೆ: ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲಿ ಅನಾಥ ಕಾರು

ಪಡುಬಿದ್ರಿ: ಹೆಜಮಾಡಿಯ ದಕ-ಉಡುಪಿ ಜಿಲ್ಲಾ ಗಡಿಯ ಚೆಕ್‍ಪೋಸ್ಟ್‍ನಲ್ಲಿ ಕಳೆದ ಹಲವಾರು ದಿನಗಳಿಂದ ಮುಂಬಯಿ ನೋಂದಣಿಯ ಬಾಡಿಗೆ ಕಾರೊಂದು ಅನಾಥ ಸ್ಥಿತಿಯಲ್ಲಿ ನಿಂತಿದ್ದು ಕೊರೊನಾ ಶಂಕೆ ವ್ಯಕ್ತಪಡಿಸಲಾಗಿದೆ.

ಕೆಲವು ದಿನಗಳ ಹಿಂದೆ ಮುಂಬಯಿಯಲ್ಲಿ ವಾಸವಿರುವ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಪತ್ನಿ ಮಕ್ಕಳ ಸಮೇತ ಕಾರು ಚಲಾಯಿಸಿಕೊಂಡು ಮಂಗಳೂರಿಗೆ ಬಂದು ಹೆಂಡತಿ ಮಕ್ಕಳನ್ನು ಕೋರೈಂಟೈನ್‍ಗೆ ಬಿಟ್ಟು ಹೋಗಿದ್ದರು.
ಅವರು ಮುಂಬಯಿ ಸೇರುವ ಮುನ್ನ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತುರ್ತಾಗಿ ಅವರು ವಾಪಾಸು ಮಂಗಳೂರಿಗೆ ಆಗಮಿಸಿದ್ದರು.

ಆದರೆ ಹೆಜಮಾಡಿಯ ಚೆಕ್‍ಪೋಸ್ಟ್‍ನಲ್ಲಿ ಅಮಾಯಕರಾದ ಅವರು ನಿಜ ವಿಷಯವನ್ನು ಹೇಳಿದ್ದರು. ಅಷ್ಟಕ್ಕೆ ಅವರ ಕಾರನ್ನು ಅಲ್ಲೇ ನಿಲ್ಲಿಸಿ ಅವರನ್ನು ಮಂಗಳೂರಿಗೆ ಬಂದೋಬಸ್ತ್ ಮೂಲಕ ಕರೆದೊಯ್ಯಲಾಗಿತ್ತು. ಆ ಬಳಿಕ ಯಾರಿಗೂ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರ ಕಾರು ಮಾತ್ರ ಅನಾಥ ಸ್ಥಿತಿಯಲ್ಲಿ ಇದೆ.