ಕೆ.ಗೋವಿಂದ ಮಣಿಯಾಣಿ (K. Govinda Maniyani)

Padubidri:  May 6th 2018:  Retired police Head Constable K. Govinda Maniyani (80) passed away at his own residence at Bengre Gundladi in Padubidri, after a brief period of illness  He was considered as one of the best police for helping people at the police station.  After serving at various police stations, he had settled in Padubidri after his retirement. He is survived by his son Rajendra Maniyani who is currently serving as the Head Constable at Padubidri police station, and two daughters.

ಪಡುಬಿದ್ರಿ: ಪೋಲೀಸರಾಗಿದ್ದ ಸಂದರ್ಭ ಠಾಣೆಗೆ ಬಂದ ಸಾರ್ವಜನಿಕರಿಗೆ ಯಾವುದೇ ಕೆಲಸವನ್ನು ಸಲೀಸಾಗಿ ಮಾಡಿಕೊಡುತ್ತಾ ಸಾರ್ವಜನಿಕ ರಂಗದಲ್ಲಿ ಅತ್ಯುತ್ತಮ ಪೋಲೀಸರೆಂದು ಪ್ರಸಿದ್ಧಿ ಪಡೆದಿದ್ದ ನಿವೃತ್ತ ಹೆಡ್‍ಕಾನ್ಸ್‍ಟೇಬಲ್ ಮಣಿಯಾಣಿ ಯಾನೆ ಕೆ.ಗೋವಿಂದ ಮಣಿಯಾಣಿ(80) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ತನ್ನ ಪಡುಬಿದ್ರಿ ಬೇಂಗ್ರೆ ಗುಂಡ್ಲಾಡಿಯ ಸ್ವಗೃಹ ಅನುಗ್ರಹದಲ್ಲಿ ನಿಧನರಾದರು.

ಮೂಲತಃ ಕೇರಳ ಕಾಸರಗೋಡಿನ ಮವ್ವಾರು ಪ್ರದೇಶದವರಾದ ಮಣಿಯಾಣಿಯವರು ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯಲ್ಲಿ ಕಾನ್ಸ್‍ಟೇಬಲ್ ಆಗಿ ನಿಯುಕ್ತಿಗೊಂಡು ಮಂಗಳೂರು,ಹಿರಿಯಡ್ಕ,ಹೆಬ್ರಿ,ವಿಟ್ಲ,ಸುಬ್ರಹ್ಮಣ್ಯ,ಕಾಪು,ಶಿರ್ವ ಮತ್ತು ಪಡುಬಿದ್ರಿಯಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ನಿವೃತ್ತಿ ಬಳಿಕ ಪಡುಬಿದ್ರಿಯಲ್ಲಿಯೇ ಮನೆ ನಿರ್ಮಿಸಿ ವಾಸವಿದ್ದರು.ಅವರ ಪುತ್ರ ರಾಜೇಂದ್ರ ಮಣಿಯಾಣಿ ಪ್ರಸ್ತುತ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ಹೆಡ್‍ಕಾನ್ಸ್‍ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿತ್ತಿದ್ದಾರೆ.
ಅವರಿಗೆ 2 ಪುತ್ರಿ,ಓರ್ವ ಪುತ್ರ ಇದ್ದಾರೆ.

ಭಾನುವಾರ ಅವರ ಪಾರ್ಥೀವ ಶರೀರವನ್ನು ಹುಟ್ಟೂರು ಮವ್ವಾರುವಿಗೆ ಕೊಂಡೊಯ್ಯಲಾಗಿದೆ.