ಕಾಶ್ಮೀರ ಪುಲ್ವಾನಾ ಉಗ್ರರ ದಾಳಿಗೆ ಮಡಿದ ಸಿಆರ್‍ಪಿಎಫ್ ಯೋಧರಿಗೆ ಮೂಲ್ಕಿಯಲ್ಲಿ ಶೃದ್ಧಾಂಜಲಿ

ಮೂಲ್ಕಿ: ಯಾವುದೇ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವ ಸಾಮಥ್ರ್ಯ ಭಾರತಕ್ಕಿದೆ.ಭಾರತೀಯರೆಲ್ಲರೂ ದೇಶದ ಯೋಧರ ಹಾಗೂ ಉನ್ನತಿಗಾಗಿ ಅವರ ಪರವಾಗಿ ನಿಲ್ಲಬೇಕು.ಭಾರತ ಸಮರ್ಥ ರಾಷ್ಟ್ರ ಎಂದು ಪ್ರಪಂಚಕ್ಕೆ ಮತ್ತೆ ತೋರಿಸಬೇಕು.ಯಾವುದೇ ದಾಳಿಯನ್ನು ಮೆಟ್ಟಿ ನಿಲ್ಲುವ ಸಾಮಥ್ರ್ಯ ಭಾರತಕ್ಕಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಸೋಂದಾ ಭಾಸ್ಕರ ಭಟ್ ಹೇಳಿದರು.

ಕಾಶ್ಮೀರದ ಪುಲ್ವಾನಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‍ಪಿಎಫ್ ಯೋಧರಿಗೆ ಮೂಲ್ಕಿಯಲ್ಲಿ ಸಾರ್ವಜನಿಕರಿಂದ ಹಮ್ಮಿಕಳ್ಳಲಾದ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರದ 130 ಕೋಟಿ ಜನರು ಭಾರತೀಯ ಯೋಧರ ಪರವಾಗಿದ್ದಾರೆ.ಇಂದು ಇಡೀ ದೇಶವೇ ದುಃಖತಪ್ತವಾಗಿದೆ.ಮಡಿದ ಯೋಧರ ಕುಟುಂಬಿಕರ ಪರವಾಗಿ ಇಡೀ ದೇಶವೇ ಎದ್ದು ನಿಂತಿದೆ.ಇದೀಗ ನಮ್ಮ ಸಾಮಥ್ರ್ಯವನ್ನು ಪ್ರಪಂಚಕ್ಕೆ ತೋರಿಸಬೇಕಾದ ಕಾಲ ಕೂಡಿ ಬಂದಿದೆ.ದೇಶದ ಪ್ರಧಾನಿ ಬಡ್ಡಿ ಸಮೇತ ಪ್ರತ್ಯುತ್ತರ ನೀಡುವ ವಾಗ್ದಾನ ನೀಡಿದ್ದಾರೆ.ಜಾತಿ ಮತ,ಪಕ್ಷ ಬೇಧ ಮರೆತು ನಮ್ಮ ಒಗ್ಗಟ್ಟನ್ನು ತೋರಿಸುವ ಕಾಲ ಕೂಡಿ ಬಂದಿದೆ ಎಂದವರು ಹೇಳಿದರು.

ಕಾಶ್ಮೀರಕ್ಕೆ 370ನೇ ವಿಧಿ ಅಳವಡಿಸಿದ್ದು ಘನಘೋರ ತಪ್ಪು ಎಂಬುದು ಈ ಘಟನೆಯಿಂದ ಸಾಬೀತಾಗಿದೆ.ಈ ಹಿಂದೆ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಸೆರೆಸಿಕ್ಕ 90ಸಾವಿರ ಪಾಕ್ ಸೈನಿಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಿದ್ದೇ ತಪ್ಪು ಎಂಬುದು ಈ ಘಟನೆಯಿಂದ ಸಾಬೀತಾಗಿದೆ.ಆದರೂ ದೇಶಕ್ಕೆ ಯಾವುದೇ ಜಟಿಲ ಸಮಸ್ಯೆಯನ್ನು ಬಗೆಹರಿಸುವ ಪರಿ ಗೊತ್ತಿದೆ.ಪ್ರಪಂಚದಲ್ಲಿ ಬೇಡುವ ಸ್ಥಿತಿಗೆ ತಲುಪಿದ ಪಾಕಿಸ್ಥಾನ ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದು,ಅವರಿಗೆ ಬೆಂಗಾವಲಾಗಿ ಚೀನಾ ದೇಶವಿದೆ.ಅವೆಲ್ಲವನ್ನೂ ಮೆಟ್ಟಿ ನಿಲ್ಲಲು ಭಾರತೀಯರೆಲ್ಲರೂ ಒಗ್ಗಟ್ಟಾಗಿ ಬೆಂಬಲ ನೀಡಬೇಕೆಂದರು.
ಹುತಾತ್ಮರಾದ ಭಾರತೀಯ ಸೈನಿಕರ ಆತ್ಮಕ್ಕೆ ಶಾಂತಿ ದೊರಕಲಿ.ಅವರ ಕುಟುಂಬಿಕರಿಗೆ ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದವರು ಹೇಳಿದರು.

ಸುಮಾರು 500ಕ್ಕೂ ಅಧಿಕ ಸಾರ್ವಜನಿಕರು ಕ್ಯಾಂಡಲ್ ಹತ್ತಿಸಿ ಮಡಿದ ಯೋಧರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಶೃದ್ಧಾಂಜಲಿ ಅರ್ಪಿಸಿದರು.

ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್,ಸತ್ಯೇಂದ್ರ ಶೆಣೈ,ಶಶಿಕಾಂತ್ ಶೆಟ್ಟಿ,ಕಮಲಾಕ್ಷ ಬಡಗುಹಿತ್ಲು,ಅಬ್ದುಲ್ ರಜಾಕ್,ಜೋಯಲ್ ಡಿಸೋಜಾ,ಮೀನಾಕ್ಷಿ ಬಂಗೇರ,ರಾಧಿಕಾ ಕೋಟ್ಯಾನ್,ಸುರೇಶ್ ಬಂಗೇರ,ಗೋಪಿನಾಥ ಪಡಂಗ,ಪುರುಷೋತ್ತಮ ರಾವ್,ಉಮೇಶ್ ಮಾನಂಪಾಡಿ,ವಿಠಲ ಎನ್.ಎಮ್.,ತಾರಾನಾಥ ಸುವರ್ಣ,ಶಿವ ಶೆಟ್ಟಿ,ನಾರಾಯಣ ಎಮ್.,ಉದಯ ಶೆಟ್ಟಿ ಆದಿಧನ್,ವಿನಯರಾಜ್ ಶೆಟ್ಟಿ,ಪ್ರಾಣೇಶ್ ಹೆಜ್ಮಾಡಿ,ಶೈಲೇಶ್ ಕುಮಾರ್,ನವೀನ್‍ರಾಜ್,ರಾಜೇಶ್ ಅಮೀನ್,ರಾಘು ಸುವರ್ಣ,ಯದೀಶ್ ಅಮೀನ್,ವಸಂತಿ ಭಂಡಾರಿ,ಶಾಂತಾರಾಮ್ ಮತ್ತಿತರರು ಉಪಸ್ಥಿತರಿದ್ದರು.