ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ದಾಳಿಗೆ ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಪಡುಬಿದ್ರಿ: ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ದಾಳಿಗೆ ಹುತಾತ್ಮರಾದ ಯೋಧರಿಗೆ ಮೊಂಬತ್ತಿ ಹೊತ್ತಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪಡುಬಿದ್ರಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಪಡುಬಿದ್ರಿ ನೇತೃತ್ವದಲ್ಲಿ ಪಡುಬಿದ್ರಿಯ ಬಸ್ಸು ನಿಲ್ದಾಣದಲ್ಲಿ ಶನಿವಾರ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿದರು.

ರೋಟರಿ ಕ್ಲಬ್‍ನ ಅಧ್ಯಕ್ಷ ಗಣೇಶ್ ಆಚಾರ್ಯ ಎರ್ಮಾಳು,ಪೂರ್ವಾಧ್ಯಕ್ಷರಾದ ಮಾಧವ ಸುವರ್ಣ,ರಾಮಕೃಷ್ಣ ಆಚಾರ್ಯ,ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಶೆಟ್ಟಿ,ಅಶೋಕ್ ಸಾಲ್ಯಾನ್ ಮಾತನಾಡಿದರು.

ಪೂರ್ವಾಧ್ಯಕ್ಷರಾದ ರಮೀಝ್ ಹುಸೇನ್,ಕಾರ್ಯದರ್ಶಿ ಸುಧಾಕರ ಕೆ,ಗ್ರಾಮ ಪಂಚಾಯಿತಿ ಅಬ್ದುಲ್ ಹಮೀದ್,ಸಂತೋಷ್ ಪಡುಬಿದ್ರಿ,ರಿಯಾಝ್ ಮುದರಂಗಡಿ,ಅಶ್ರಫ್,ನಿಯಾಝ್,ಹೆಜಮಾಡಿ ಕರಾವಳಿ ಯುವತಿ ವೃಂದದ ಅಧ್ಯಕ್ಷೆ ಪವಿತ್ರ ಗಿರೀಶ್,ಇನ್ನರ್ ವೀಲ್ ಅಧ್ಯಕ್ಷೆ ಸುಧಾ ಎಂ.ಸುವರ್ಣ,ಕಾರ್ಯದರ್ಶಿ ಸುನಂದಾ ವಿಜಯ್,ಸದಸ್ಯರಾರ ಸುನೀತಾ ಭಕ್ತ ವತ್ಸಲ,ಕಸ್ತೂರಿ ಪ್ರವೀಣ್,ಉಪಸ್ಥಿತರಿದ್ದರು.