ಕಾಪು ತಾಲೂಕಿನ 128 ಮಂದಿ ಜಾರ್ಖಂಡ್‍ಗೆ ರವಾನೆ

ಪಡುಬಿದ್ರಿ: ಕಾಪು ಕ್ಷೇತ್ರ ವ್ಯಾಪ್ತಿಯ ಹೆಜಮಾಡಿ, ಪಡುಬಿದ್ರಿ, ಬಂಟಕಲ್ಲು, ಕಾಪು ಸಹಿತ ವಿವಿದೆಡೆಗಳಲ್ಲಿ ವಾಸವಿದ್ದ 128 ಮಂದಿ ಜಾರ್ಖಂಡ್ ವಾಸಿಗಳನ್ನು ಸೋಮವಾರ ಹೆಜಮಾಡಿಯಿಂದ ಜಾರ್ಖಂಡ್‍ಗೆ ಕಳುಹಿಸಿಕೊಡಲಾಯಿತು.
ಕಾಪು ಸಿಪಿಐ ಮಹೇಶ್ ಪ್ರಸಾದ್ ನೇತೃತ್ವದಲ್ಲಿ 128 ಮಂದಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ 3 ಸರಕಾರಿ ಬಸ್ಸುಗಳ ಮೂಲಕ ಮಂಗಳೂರು ರೈಲು ನಿಲ್ದಾಣಕ್ಕೆ ತಲಾ ರೂ.1075 ನೀಡಿ ಕಳುಹಿಸಲಾಯಿತು.

ರೂ.940 ರೈಲು ದರ, ಮತ್ತು ರೂ.135 ಬಸ್ಸು ದರವನ್ನು ಬಸ್ಸು ನಿರ್ವಾಹಕರ ಮೂಲಕ ಸರಕಾರದ ವತಿಯಿಂದ ನೀಲಾಗಿದ್ದು, ಬಂದೋಬಸ್ತ್‍ಗಾಗಿ ಪೋಲಿಸರನ್ನು ನಿಯೋಜಿಸಲಾಗಿತ್ತು.

ಪಡುಬಿದ್ರಿ ಎಸ್‍ಐ ಸುಬ್ಬಣ್ಣ ಬಿ., ಕಾಪು ಆರ್‍ಐ ರವಿಶಂಕರ್, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಮತ್ತು ಉಪಾಧ್ಯಕ್ಷ ಸುಧಾಕರ ಕರ್ಕೇರ, ವಿಎ ಅರುಣ್ ಕುಮಾರ್ ಅವರ ವಿವರ ಪಡೆಯಲು ಸಹಕರಿಸಿದ್ದರು.