ಉತ್ತಮ ತರಬೇತಿಗಳ ಮೂಲಕ ಪರಿಪೂರ್ಣರಾಗಲು ಸಾಧ್ಯ-ಶಶಿಕಾಂತ್ ಪಡುಬಿದ್ರಿ

ಪಡುಬಿದ್ರಿ: ಪರಿಶಿಷ್ಟ ಪಂಗಡದವರನ್ನೇ ಮುಖ್ಯವಾಗಿಸಿಕೊಂಡು ಅದರೊಂದಿಗೆ ಸಮಾಜದ ಎಲ್ಲಾ ಸ್ತರದ ಜನರಿಗೂ ಕುಶಲತೆಯ ಸಹಿತವಾದ ವಿವಿಧ ತರಬೇತಿಗಳನ್ನು ನೀಡುವ ಈ ಕಾರ್ಯಕ್ರಮವು ಸ್ತುತ್ಯಾರ್ಹವಾಗಿದೆ. ಸರಕಾರದ ವಿವಿಧ ಯೋಜನೆಗಳಿಗೂ ಸುಲಭವಾಗಿ ಪರಿಶಿಷ್ಟ ಪಂಗಡದ ಮಂದಿಯನ್ನು ಹೊಂದಿಸಿಕೊಳ್ಳಲಾಗದ ಈ ಕಾಲಘಟ್ಟದಲ್ಲಿ ಪ. ಪಂಗಡದ 19ಮಂದಿ ಇಲ್ಲಿ ತರಬೇತಿ ಕಾಲದ ಕೂಲಿಯೊಂದಿಗೆ ತರಬೇತಿಗಳನ್ನು ಹೊಂದಲಿದ್ದಾರೆ. ಕುಶಲತೆಯೊಂದಿಗಿನ ಪರಿಪೂರ್ಣ ತರಬೇತಿಯನ್ನು ಪಡೆದು ಕೆಲಸಕ್ಕೆ ಬೇಕಾದ ಉಪಕರಣಗಳ ಕಿಟ್ಟನ್ನೂ ಸಹಿತ ಹೊಂದಿಕೊಳ್ಳಲಿರುವ ಈ ತರಬೇತಿಯ ಮೂಲಕ ಉತ್ತಮ ಕಾರ್ಮಿಕರಾಗು ಸಾಧ್ಯ. ಇಲಾಖೆಯ ಎಲ್ಲಾ ಉತ್ತಮ ಸವಲತ್ತುಗಳನ್ನು ತಾವು ಹೊಂದಿಕೊಳ್ಳಬೇಕು ಎಂದು ಪಡುಬಿದ್ರಿ ಜಿ. ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಅವರು ನ. 29ರಂದು ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಕೂಲಿ ಸಹಿತವಾಗಿ ಒಂದು ತಿಂಗಳುಗಳ ತರಬೇತಿ ಅವಧಿಯ ಶ್ರಮ ಸಾಮಥ್ರ್ಯ ಯೋಜನೆಯ ತರಬೇತಿ ಕಾರ್ಯಕ್ರಮವನ್ನು ಪಾದೆಬೆಟ್ಟು ಗ್ರಾಮದ ಚಂದ್ರಶೇಖರ ರಾಯರ ಹಳೇ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಎಸ್. ಜೋಗಾರ್, ದುಡಿಯುವವರಿಗಾಗಿ 2006ರಲ್ಲಿ ಕರ್ನಾಟಕ ರಾಜ್ಯವು ಕಾರ್ಮಿಕ ಕಲ್ಯಾಣ ಕಾಯಿದೆಯನ್ನು ಜಾರಿಗೊಳಿಸಿತು. ಮುಂದೆ ಕಟ್ಟಡ ಮತ್ತು ಇತರೆಲ್ಲಾ ದುಡಿಯುವವರನ್ನು ಒಗ್ಗೂಡಿಸಿ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ರಚಿಸಲಾಗಿದೆ. ಇದರಡಿಯಲ್ಲಿ ಮಂಡಳಿಯ ಸದಸ್ಯತ್ವದೊಂದಿಗೆ ವಿವಿಧ ತರಬೇತಿ ಕಾರ್ಯಕ್ರಮಗಳು, ಕ್ಷೇಮ ನಿಧಿ ಯೋಜನೆಗಳು, ವಿಮಾ ಯೋಜನೆಗಳನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 30000 ಕಾರ್ಮಿಕರನ್ನು ಗುರುತಿಸಲಾಗಿದ್ದು ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳನ್ನೂ ಕಾರ್ಮಿಕರಾಗಿ ಪರಿಗಣಿಸಿ ತರಬೇತಿಗಳನ್ನೂ, ವಿವಿಧ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಕುಶಲ ತರಬೇತಿಯ ಸಹಿತ ಈ ಕಾರ್ಮಿಕರನ್ನು ಮುಂದೆ ಕಾರ್ಮಿಕ ಬೇಡಿಕೆ, ಪೂರೈಕೆಗಳ ಸಮತೋಲನವನ್ನು ಕಾಯ್ದಕೊಳ್ಳುವುದಕ್ಕಾಗಿ ಆ್ಯಪ್‍ಗಳ ಮೂಲಕವೇ ಕೆಲಸಗಳನ್ನು ನೀಡಲಾಗುವ ದೂರದೃಷ್ಟಿತ್ವ ಇಲಾಖೆಯದ್ದಾಗಿದೆ ಎಂದರು.

ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಕಾರ್ಮಿಕ ತರಬೇತಿ ಪಡೆಯುವವರಿಗೆ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.

ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಗ್ರಾಪಂ ಮಾಜಿ ಸದಸ್ಯ ಸದಸ್ಯ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್, ಗ್ರಾಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಡುಪಿಯ ಪ್ರಾಧ್ಯಾಪಕ ಪೆÇ್ರ| ಪ್ರಕಾಶ್ ಕ್ರಮಧಾರಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.