ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಆರೋಗ್ಯ ಇಲಾಖಾ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಶಾಲು ಹೊದಿಸಿ ಗೌರವ

ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಆಧ್ಯಾತ್ಮಕ ಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಸೋಮವಾರ ಸಂಜೆ ಜೆಜಮಾಡಿಯ ಗಡಿಭಾಗದ ಚೆಕ್‍ಪೋಸ್ಟ್‍ನಲ್ಲಿ ಹಗಳಿರುಳು ಕಾರ್ಯನಿರ್ವಹಿಸುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಆರೋಗ್ಯ ಇಲಾಖಾ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭ ಆಶ್ರಮದ ನಿರ್ದೇಶಕಿ ರಜನೀ ಚಂದ್ರಶೇಖರ್, ರಾಹುಲ್ ಭಟ್, ರೋಶನಿ ಭಟ್, ಪುನೀತ್‍ಕೃಷ್ಣ ಉಪಸ್ಥಿತರಿದ್ದರು.