ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಸಮಗ್ರ ಜೀರ್ಣೋದ್ಧಾರದ ಮೊದಲ ಹಂತದ ಕಾಮಗಾರಿಗಳಿಗೆ ಚಾಲನೆ

ಮೊಗವೀರ ಸಮಾಜದ ಕೇಂದ್ರ ಸ್ಥಾನ ಉಚ್ಚಿಲ ಮಹಾಲಕ್ಷ್ಮೀ ನಗರದಲ್ಲಿ 32 ಕೋಟಿ ರೂ.ವೆಚ್ಚದಲ್ಲಿ ಶ್ರೀ ದೇವಳ ಪುನರ್‍ನಿರ್ಮಾಣ
ಪಡುಬಿದ್ರಿ: ಮೊಗವೀರ ಸಮಾಜದ ಕೇಂದ್ರ ಸ್ಥಾನವಾದ ಉಚ್ಚಿಲ ಮಹಾಲಕ್ಷ್ಮೀ ನಗರದಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳವನ್ನು 32 ಕೋಟಿ ರೂ.ವೆಚ್ಚದಲ್ಲಿ ಪುನರ್‍ನಿರ್ಮಾಣಗೊಳಿಸಲಿದ್ದು, ಇದರ ಪ್ರಥಮ ಹಂತವಾಗಿ ಭಾನುವಾರ ಮೊದಲ ಹಂತದ ವಿವಿಧ ಕಾಮಗಾರಿಗಳಿಗೆ ನಾಡೋಜ ಡಾ.ಜಿ.ಶಂಕರ್ ಚಾಲನೆ ನೀಡಿದರು.
ದ.ಕ.ಮೊಗವೀರ ಮಹಾಹನ ಸಂಘದ ಆಡಳಿತದ ಶ್ರೀ ದೇವಳದಲ್ಲಿ ಆರಂಭದಲ್ಲಿ ಧಾರ್ಮಿಕ ವಿಧಿಗಳು ನಡೆದ ಬಳಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ದೇವಳದ ರಾಜಗೋಪುರದ ಶಿಲಾನ್ಯಾಸ ನಡೆಸಲಾಯಿತು. ತದನಂತರ ಮೊಗವೀರರ ಕೌಶಲಾಭಿವೃದ್ಧಿ ಕೇಂದ್ರ ಮತ್ತು ಶೌಚಾಲಯ ಸಂಕೀರ್ಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಸಲಾಯಿತು. ಇದೇ ಸಂದರ್ಭ ಸಮಗ್ರ ಜೀರ್ಣೋದ್ಧಾರ ಸಮಿತಿಯ ಕಾರ್ಯಾಲಯ ಮತ್ತು ಶ್ರೀ ದೇವಳದ ನೂತನ ವೆಬ್‍ಸೈಟ್‍ನ್ನು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ನಾಡೋಜ.ಡಾ.ಜಿ.ಶಂಕರ್ ಗಣ್ಯರ ಉಪಸ್ಥಿತಿಯಲ್ಲಿ ನಡೆಸಿದರು.

ಕ್ಷೇತ್ರದ ತಂತ್ರಿಗಳಾದ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ, ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಶ್ರೀಪತಿ ಉಪಾಧ್ಯಾಯ ಮತ್ತವರ ತಂಡ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ.ಅಮೀನ್, ಗೌರವ ಸಲಹೆಗಾರರಾದ ಶಾಸಕ ಲಾಲಾಜಿ ಆರ್.ಮೆಂಡನ್, ಕೇಶವ ಬಿ.ಕುಂದರ್ ಸಾಸ್ತಾನ, ಆನಂದ ಸಿ.ಕುಂದರ್, ಯಶಪಾಲ್ ಎ.ಸುವರ್ಣ, ಭುವನೇಂದ್ರ ಕಿದಿಯೂರು, ಸರಳಾ ಬಿ.ಕಾಂಚನ್, ಉಪಾಧ್ಯಕ್ಷರುಗಳಾದ ವೈ.ಗಂಗಾಧರ್ ಸುವರ್ಣ, ಮೋಹನ್ ಬೇಂಗ್ರೆ, ಉಮೇಶ್ ಟಿ.ಕರ್ಕೇರ ಹೊಸಬೆಟ್ಟು, ಪ್ರಸಾದ್ ಕಾಂಚನ್, ಆನಂದ ಪಿ.ಸುವರ್ಣ, ಕೆ.ಕೆ.ಕಾಂಚನ್, ಸತೀಶ್ ಕುಂದರ್, ಯಶೋಧರ್ ಅಮೀನ್, ಯು.ಗಣೇಶ್, ಶರತ್ ಎಲ್.ಕರ್ಕೇರ, ಕೇಶವ ಎಮ್.ಕೋಟ್ಯಾನ್, ಜನಾರ್ಧನ ತಿಂಗಳಾಯ, ಶಿವಪ್ಪ ಟಿ.ಕಾಂಚನ್, ಕೃಷ್ಣ ಸುವರ್ಣ, ಸದಾಶಿವ ಕೋಟ್ಯಾನ್, ಅಪ್ಪಿ ಎಸ್.ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಶಂಕರ ಸಾಲ್ಯಾನ್, ಕೋಶಾಧಿಕಾರಿ ವಿನಯ ಕರ್ಕೇರ, ಕಾರ್ಯದರ್ಶಿಗಳಾದ ಶಶಿಕಾಂತ್ ಪಡುಬಿದ್ರಿ, ಜಗದೀಶ್ ಬಂಗೇರ, ಸದಾನಂದ ಬಂಗೇರ, ಭರತ್ ಎರ್ಮಾಳ್, ದಯಾನಂದ ಸುವರ್ಣ, ಎನ್.ಡಿ.ಬಂಗೇರ, ಸತೀಶ್ ಸಾಲ್ಯಾನ್, ಗುಲಾಬಿ ಆರ್.ಕೋಟ್ಯಾನ್, ಕಿಶೋರ್ ಡಿ.ಸುವರ್ಣ, ವಿಠಲ ಕರ್ಕೇರ, ದಯಾನಂದ ಕುಂದರ್, ಯತೀಶ್ ಬೈಕಂಪಾಡಿ, ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ದೇವದಾಸ್ ಬೋಳೂರು, ಪದಾಧಿಕಾರಿಗಳಾದ ಸುಧಾಕರ ಕುಂದರ್, ಶಿವರಾಮ ಕುಂದರ್, ಚಂದ್ರಶೇಖರ ಕಾಂಚನ್, ಸಂಜೀವ ಮೆಂಡನ್, ಕೇಶವ ಕೋಟ್ಯಾನ್, ಶರಣ್ ಕುಮಾರ್ ಮಟ್ಟು, ಶ್ರೀ ಮಹಾಲಕ್ಷ್ಮೀ ದೇವಳದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಕಾರ್ಯದರ್ಶಿ ದಿನೇಶ್ ಆರ್.ಕೋಟ್ಯಾನ್, ಕೋಶಾಧಿಕಾರಿ ಲೀಲಾಧರ ಸಾಲ್ಯಾನ್, ಮುಂಬೈ ಸಮಿತಿಯ ಅಧ್ಯಕ್ಷ ಬಿ.ಜೆ.ಶ್ರೀಯಾನ್, ಮಲ್ಪೆ ವಲಯ, ಮಂಗಳೂರು ವಲಯ, ಬಾರ್ಕೂರು ವಲಯ ಮತ್ತು ಮಧ್ಯ ವಲಯಗಳ ಪದಾಧಿಕಾರಿಗಳು, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವಿನ್ಯಾಸಗಾರ ಯೋಗೀಶ್ ಚಂದ್ರಾಧರ್ ಕಿದಿಯೂರು, ಶಿಲ್ಪಿ ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು.
ಇದೇ ಸಂದರ್ಭ ವಿವಿಧ ಮೊಗವೀರ ಮಹಾಸಭಾ ಹಾಗೂ ಇತರ ದಾನಿಗಳು ಜೀರ್ಣೋದ್ಧಾರ ಕಾರ್ಯಕ್ಕೆ ಧನಸಹಾಯ ನೀಡಿದರು. ಬಳಿಕ ಜಂಟಿ ಸಮಿತಿಯ ಪದಾಧಿಕಾರಿಗಳ ಮಹತ್ವದ ಸಭೆ ನಡೆಯಿತು.