ಅವಧೂತ ಪರಂಪರೆಗೆ ದೊಡ್ಡ ಕೊಡುಗೆ ನೀಡಿದವರು ಸದ್ಗುರು ನಿತ್ಯಾನಂದರು ಪಡುಬಿದ್ರಿ ಬಂಟರ ಭವನದಲ್ಲಿ ಸದ್ಗುರು ನಿತ್ಯಾನಂದ ಮೂರ್ತಿ ಪ್ರತಿಷ್ಠಾಪಿಸಿ ಒಡಿಯೂರು ಶ್ರೀ

ಪಡುಬಿದ್ರಿ ಅವಧೂತ ಪರಂಪರೆಗೆ ಸೂಕ್ತವಾದವರು ಸದ್ಗುರು ನಿತ್ಯಾನಂದರು. ಅವರು ಅವಧೂತ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಒಡಿಯೂರು ದತ್ತಗುರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಪಡುಬಿದ್ರಿ ಬಂಟರ ಭವನದಲ್ಲಿ ಗುರುವಾರ ಸದ್ಗುರು ಶ್ರೀ ನಿತ್ಯಾನಂದ ಪರಮಗುರುಗಳ ಮೂರ್ತಿ ಪ್ರತಿಷ್ಠಾಪನಾ ಸಂಭ್ರಮ ಸಂದರ್ಭ ಅವರು ಆಶೀರ್ವಚಿಸಿದರು.

ಕತ್ತಲೆ ದೂರೀಕರಿಸಿ ಬೆಳಕು ನೀಡಿದವರು ಸದ್ಗುರು ನಿತ್ಯಾನಂದರು ಎಂದ ಅವರು ಬಂಟ ಸಮುದಾಯ ಸಮಾಜದ ಸಂರಕ್ಷಕರು. ತಾವೂ ಬೆಳೆದು ಇತರ ಸಮಾಜವನ್ನೂ ಬೆಳೆಸುವ ಮನೋಭಾವವುಳ್ಳವರು. ಅದ್ಭುತ ನಾಯಕತ್ವಗುಣವುಳ್ಳ ಅವರ ನಾಯಕತ್ವ ಸದ್ವಿನಿಯೋಗವಾಗಲಿ ಎಂದವರು ಹೇಳಿದರು.

ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಾಲವೇ ನಿರ್ಣಯಿಸಿದಂತೆ ಇಲ್ಲಿ ಸದ್ಗುರು ನಿತ್ಯಾನಂದರ ಮೂರ್ತಿ ಪ್ರತಿಷ್ಠೆಯಾಗಿದೆ. ಈ ಮೂಲಕ ಸಮಾಜ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು.
ಸದ್ಗುರು ನಿತ್ಯಾನಂದರ ಮೂರ್ತಿ ದಾನಿಗಳಾದ ಎರ್ಮಾಳು ಚಂದ್ರಹಾಸ ಶೆಟ್ಟಿ ಪುಣೆ-ಸಾರಿಕಾ ಚಂದ್ರಹಾಸ ಶೆಟ್ಟಿ ದಂಪತಿ ಶ್ರೀದ್ವಯರನ್ನು ಗೌರವಿಸಿದರು.

ಉಚ್ಚಿಲ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ನಿತ್ಯಾನಂದ ಗುರುಗಳ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಗಣಹೋಮ, ನಾಗದೇವರಿಗೆ ಪಂಚಾಮೃತ ಅಭಿಷೇಕ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಕಾಂಞಗಾಡ್ ಶ್ರೀ ವಿಜಯಾನಂದ ಸ್ವಾಮೀಜಿ, ಖ್ಯಾತ ಶೆಹನಾಯಿ ವಾದಕ ಹಿದಾಯತುಲ್ಲಾ ಎರ್ಮಾಳು, ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರನ್ನು ಈ ಸಂದರ್ಭ ಗೌರವಿಸಲಾಯಿತು.

ಬೆಳಗಾವಿ ಬೋಳ ರಘುರಾಮ ಕೆ.ಶೆಟ್ಟಿ, ಮುಂಬೈ ಕೃಷ್ಣ ವೈ.ಶೆಟ್ಟಿ, ಪಡುಬಿದ್ರಿ ಬೀಡು ಅರಸರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್, ಬ್ರಹ್ಮಸ್ಥಾನ ಪಾತ್ರಿ ಪಿ.ಜಿ.ನಾರಾಯಣ ರಾವ್, ವನದುರ್ಗಾ ಟ್ರಸ್ ಅಧ್ಯಕ್ಷ ಕೊರ್ನಾಯ ಶ್ರೀಪತಿ ಕೊರ್ನಾಯ, ಪದ್ಮನಾಭ ಕೊರ್ನಾಯ, ರವೀಂದ್ರ ನಾಥ ಜಿ.ಹೆಗ್ಡೆ, ಸುರೇಶ್ ಶೆಟ್ಟಿ ಗುಂಡ್ಲಾಡಿ, ಗೋವ ಸದಾನಂದ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ಎರ್ಮಾಳು ಉದಯ ಶೆಟ್ಟಿ, ಎರ್ಮಾಳು ಸೀತಾರಾಮ ಶೆಟ್ಟಿ, ಎರ್ಮಾಳು ವಿಶ್ವನಾಥ ಶೆಟ್ಟಿ, ಎರ್ಮಾಳು ಬಾಲಚಂದ್ರ ಶೆಟ್ಟಿ, ಯಶೋದಾ ಶೆಟ್ಟಿ, ಸಂತೋಷ್ ಶೆಟ್ಟಿ ಪುಣೆ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ವೈ.ಶಶಿಧರ್ ಕೆ.ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷರಾದ ಶ್ರೀನಾಥ್ ಹೆಗ್ಡೆ ನಡ್ಸಾಲುಗುತ್ತು ಮತ್ತು ಜ್ಯೋತಿ ಶೆಟ್ಟಿ ಎರ್ಮಾಳು, ಜತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಅವರಾಲು, ಟ್ರಸ್ಟ್ ಕೋಶಾಧಿಕಾರಿ ಅನಿಲ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಆರ್.ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಮಾಹಿತಿ ಕೈಪಿಡಿ ಸಂಚಾಲಕ ಮುರಳೀನಾಥ ಶೆಟ್ಟಿ, ಗ್ರಾಮ ಸಮಿತಿಯ ಸಂಚಾಲಕ ಹರೀಶ್ ಶೆಟ್ಟಿ ಅವರಾಲು, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಕಲ್ಯಾಣ ನಿಧಿ ಸಂಚಾಲಕ ಹರೀಶ್ ಕೆ.ಶೆಟ್ಟಿ ಪಾದೆಬೆಟ್ಟು, ಪ್ರಚಾರ ಸಮಿತಿಯ ಸಂಚಾಲಕ ಜಯ ಶೆಟ್ಟಿ ಪದ್ರ, ಧಾರ್ಮಿಕ ಸಮಿತಿಯ ಸಂಚಾಲಕ ಸೀತಾರಾಮ ಶೆಟ್ಟಿ ಪದ್ರ, ಸಂತೋಷ್ ಶೆಟ್ಟಿ ಪಲ್ಲವಿ ಉಪಸ್ಥಿತರಿದ್ದರು.
ಬಳಿಕ ಸಂಘದ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.