ಅತಿಕಾರಿಬೆಟ್ಟು; ಗಮನ ಸೆಳೆದ ತುಳು ಲಿಪಿ ನಾಮಫಲಕ

ಮೂಲ್ಕಿ: ಕೊರೊನಾ ಲಾಕ್‍ಡೌನ್ ನಡುವೆ ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಪಂ ತುಳು ಲಿಪಿಯಲ್ಲಿ ನಾಮಫಲಕಗಳನ್ನು ರಸ್ತೆಗೆ ಅಳವಡಿಸುವ ಮೂಲಕ ಗಮನ ಸೆಳೆದಿದೆ.

ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಶಿಮಂತೂರು ಗ್ರಾಮದ ಅಂಗರಗುಡ್ಡೆ ರಸ್ತೆಗಳಿಗೆ ಪ್ರಧಾನವಾಗಿ ತುಳು ಭಾಷೆಯಲ್ಲಿ ಹಾಗೂ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಲಾಗಿದೆ.

ಗ್ರಾಪಂ ಪಿಡಿಒ ರವಿ ಹಾಗೂ ಸದಸ್ಯ ಜೀವನ್ ಅಂಗರಗುಡ್ಡೆ ವಿಶೇಷ ಮುತುವರ್ಜಿ ವಹಿಸಿ ಗ್ರಾಪಂ ಅನುದಾನದ ಮೂಲಕ ನಾಮಫಲಕ ಅಳವಡಿಸಿದ್ದಾರೆ.